ಪೋಸ್ಟ್‌ಗಳು

ನಾಯಕತ್ವವನ್ನು ಬಲಿಷ್ಠ ಪಡಿಸುವಲ್ಲಿ ಪಾತ್ರವಹಿಸಿದ ನನ್ನ ಹವ್ಯಾಸ: ನೃತ್ಯ

ಇಮೇಜ್
ನೃತ್ಯವು ನನ್ನ  ಹವ್ಯಾಸ, ನನ್ನ ಜೀವನದ ಅವಿಭಾಜ್ಯ ಅಂಗ. ಬಾಲ್ಯದಿಂದಲೇ ನಾನು ಶಾಸ್ತ್ರೀಯ ನೃತ್ಯದಲ್ಲಿ ತೊಡಗಿಕೊಂಡಿರುವುದರಿಂದ, ನಾನು ಕಲಿಯುತ್ತಿರಲಿ, ಕಲಿಸುತ್ತಿರಲಿ, ನೃತ್ಯ ಸಂಯೋಜನೆ ಮಾಡಿತ್ತಿರಲಿ  ಅಥವಾ ಅಭ್ಯಾಸ ಮಾಡುತ್ತಿರಲಿ, ನನ್ನ ಮೇಲೆ ನೃತ್ಯದ   ಪ್ರಭಾವ ಬಲವಾಗಿದೆ.  ನಾಯಕರಾಗಿ ನಿಮ್ಮ ಸಾಮರ್ಥ್ಯಗಳು ಮತ್ತು ನಡವಳಿಕೆಯನ್ನು ರೂಪಿಸಲು ನಿಮ್ಮ ಹವ್ಯಾಸವು ಹೇಗೆ ಸಹಾಯ ಮಾಡುತ್ತವೆ, ಎಂಬುದರ ಕುರಿತು ನನ್ನ ನಂಬಿಕೆಯನ್ನು ಇದು ಬಲಪಡಿಸುತ್ತದೆ. ನನ್ನ ಕೆಲವು ಅನುಭವಗಳನ್ನು ಉಲ್ಲೇಖಿಸಲು ಇಷ್ಟ ಪಡುತ್ತೇನೆ. ಮನಸ್ಥಿತಿಯ ಅಡೆತಡೆಗಳನ್ನು ನಿವಾರಿಸಿವುದು   ಕಳೆದ ಮೂರು ವರ್ಷಗಳಲ್ಲಿ ನನ್ನನ್ನು ಮುನ್ನಡೆಸಿದ ಪ್ರಮುಖ ಅಂಶದಿಂದ ನಾನು ಪ್ರಾರಂಭಿಸುತ್ತೇನೆ. ನಾನು ಹಲವು ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದೇನೆ . ಅದು ನನ್ನ ಹವ್ಯಾಸವಲ್ಲದೆ, ನನ್ನ ಗುರುತಾಗಿಯೂ ಮಾರ್ಪಟ್ಟಿತ್ತು. ಆದರೆ ಒಂದು ದಿನ ನನ್ನ ನೃತ್ಯಾಭ್ಯಾಸ ನಿಂತಿತು. ಬಹುಮಟ್ಟಿಗೆ, ಒಂದು ದಶಕಕ್ಕೂ ಹೆಚ್ಚು ಕಾಲ ನೃತ್ಯದಿಂದ ದೂರವಿದ್ದೆ. ಇದಕ್ಕೆ ಕಾರಣ ಸಮಯದ ಕೊರತೆ ಎಂದು  ನನ್ನ ಮನಸ್ಸು ನಿರ್ಧರಿಸಿತು. ಆಗ, ನನ್ನ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ನಾನು ಏನೆ ಮಾಡುತ್ತಿದ್ದರೂ, ನನಗೆ ಆ ಕೆಲಸದಲ್ಲಿ ತೃಪ್ತಿಯಾಗುತ್ತಿರಲಿಲ್ಲ. ಈ ಮನಸ್ಥಿತಿಯಿಂದ ಹೊರಗೆ ಬರಲು, ನಾನು ಮತ್ತೆ ನೃತ್ಯ ಮಾಡಲು ಪ್ರಾರಂಭಿ...