ನಾಯಕತ್ವವನ್ನು ಬಲಿಷ್ಠ ಪಡಿಸುವಲ್ಲಿ ಪಾತ್ರವಹಿಸಿದ ನನ್ನ ಹವ್ಯಾಸ: ನೃತ್ಯ


ನೃತ್ಯವು ನನ್ನ  ಹವ್ಯಾಸ, ನನ್ನ ಜೀವನದ ಅವಿಭಾಜ್ಯ ಅಂಗ. ಬಾಲ್ಯದಿಂದಲೇ ನಾನು ಶಾಸ್ತ್ರೀಯ ನೃತ್ಯದಲ್ಲಿ ತೊಡಗಿಕೊಂಡಿರುವುದರಿಂದ, ನಾನು ಕಲಿಯುತ್ತಿರಲಿ, ಕಲಿಸುತ್ತಿರಲಿ, ನೃತ್ಯ ಸಂಯೋಜನೆ ಮಾಡಿತ್ತಿರಲಿ  ಅಥವಾ ಅಭ್ಯಾಸ ಮಾಡುತ್ತಿರಲಿ, ನನ್ನ ಮೇಲೆ ನೃತ್ಯದ   ಪ್ರಭಾವ ಬಲವಾಗಿದೆ. 
ನಾಯಕರಾಗಿ ನಿಮ್ಮ ಸಾಮರ್ಥ್ಯಗಳು ಮತ್ತು ನಡವಳಿಕೆಯನ್ನು ರೂಪಿಸಲು ನಿಮ್ಮ ಹವ್ಯಾಸವು ಹೇಗೆ ಸಹಾಯ ಮಾಡುತ್ತವೆ, ಎಂಬುದರ ಕುರಿತು ನನ್ನ ನಂಬಿಕೆಯನ್ನು ಇದು ಬಲಪಡಿಸುತ್ತದೆ. ನನ್ನ ಕೆಲವು ಅನುಭವಗಳನ್ನು ಉಲ್ಲೇಖಿಸಲು ಇಷ್ಟ ಪಡುತ್ತೇನೆ.

ಮನಸ್ಥಿತಿಯ ಅಡೆತಡೆಗಳನ್ನು ನಿವಾರಿಸಿವುದು 

ಕಳೆದ ಮೂರು ವರ್ಷಗಳಲ್ಲಿ ನನ್ನನ್ನು ಮುನ್ನಡೆಸಿದ ಪ್ರಮುಖ ಅಂಶದಿಂದ ನಾನು ಪ್ರಾರಂಭಿಸುತ್ತೇನೆ. ನಾನು ಹಲವು ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದೇನೆ . ಅದು ನನ್ನ ಹವ್ಯಾಸವಲ್ಲದೆ, ನನ್ನ ಗುರುತಾಗಿಯೂ ಮಾರ್ಪಟ್ಟಿತ್ತು. ಆದರೆ ಒಂದು ದಿನ ನನ್ನ ನೃತ್ಯಾಭ್ಯಾಸ ನಿಂತಿತು. ಬಹುಮಟ್ಟಿಗೆ, ಒಂದು ದಶಕಕ್ಕೂ ಹೆಚ್ಚು ಕಾಲ ನೃತ್ಯದಿಂದ ದೂರವಿದ್ದೆ. ಇದಕ್ಕೆ ಕಾರಣ ಸಮಯದ ಕೊರತೆ ಎಂದು  ನನ್ನ ಮನಸ್ಸು ನಿರ್ಧರಿಸಿತು. ಆಗ, ನನ್ನ ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ನಾನು ಏನೆ ಮಾಡುತ್ತಿದ್ದರೂ, ನನಗೆ ಆ ಕೆಲಸದಲ್ಲಿ ತೃಪ್ತಿಯಾಗುತ್ತಿರಲಿಲ್ಲ. ಈ ಮನಸ್ಥಿತಿಯಿಂದ ಹೊರಗೆ ಬರಲು, ನಾನು ಮತ್ತೆ ನೃತ್ಯ ಮಾಡಲು ಪ್ರಾರಂಭಿಸಿದೆ. ನನ್ನಲಿನ  ಸೃಜನಶೀಲತೆ  ಮತ್ತೆ ಕಾಣಲಾರಂಭಿಸಿದವು. ನಾನು ನನ್ನ ಜೀವನ ಮತ್ತು ಕೆಲಸವನ್ನು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನದಿಂದ ನೋಡಲು ಸಾಧ್ಯವಾಯಿತು. ಮನಸ್ಸು ಶಾಂತವಾಗಿರುವುದರಿಂದ ಹೆಚ್ಚಿನ ಪ್ರಭಾವಶೀಲತೆಯನ್ನು ಸಾಧಿಸುವುಲ್ಲಿ ಸಫಲಳಾದೆ.

ಕೆಲವು ಸಂದರ್ಭಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು, ನಮ್ಮ ನಾಯಕತ್ವ ಶೈಲಿಯಲ್ಲಿ ಅಗತ್ಯವಿರುವುದು, ನಾವು ನಮ್ಮ ಮನಸ್ಸನ್ನು ತೆರೆದು, ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವುದು. ಕಠಿಣ ಮನಸ್ಥಿತಿಯು ನಿಮ್ಮ ನಾಯಕತ್ವದ ಶೈಲಿಗೆ ಹಾನಿ ಮಾಡಬಹುದು. ಕೆಲವೊಮ್ಮೆ, ಹಿಂದಿನ ತಪ್ಪುಗಳನ್ನು ಜಯಿಸಲು, ಪ್ರಕ್ಷುಬ್ಧತೆಯನ್ನು ನಿವಾರಿಸಲು, ಮತ್ತು ಹೊಸದಾಗಿ ಪ್ರಾರಂಭಿಸಲು, ಮನಸ್ಸಿನಲ್ಲಿರುವ ಅಡೆತಡೆಗಳನ್ನು ನಿವಾರಿಸುವುದು ತುಂಬಾ ಅಗತ್ಯವಾಗಿರುತ್ತದೆ. ಹೊಸ ಆರಂಭ, ಹೊಸ ಶೈಲಿಯು ಇಡೀ ಸಂಸ್ಥೆಯನ್ನೆ ಬದಲಾಯಿಸಬಹುದು!

ಕಲಿಕೆಗೆ ಆರಂಭವಿಲ್ಲ, ಅಂತ್ಯವಿಲ್ಲ

ಕಲಿಕೆಗೆ ಆರಂಭವಿಲ್ಲ, ಅಂತ್ಯವಿಲ್ಲ ಮತ್ತು, ವಯಸ್ಸೂ ಇಲ್ಲ. ಮೊದಲು ನಾನು ಪ್ರಖ್ಯಾತ ನೃತ್ಯಗಾರರ ವೀಡಿಯೊಗಳನ್ನು ನೋಡುವ ಮೂಲಕ ಬಹಳಷ್ಟು ಕಲಿಯಲು ಪ್ರಾರಂಭ ಮಾಡಿದೆ, ನನ್ನ ತಪ್ಪುಗಳನ್ನು ಸರಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೆ. ಅದು ನನಗೆ ತುಂಬಾ ಪ್ರೇರಣೆ ನೀಡಿ, ನಾನು ಈಗ ಹತ್ತು ವರ್ಷಗಳಿಂದ ಹೊಸ ಶೈಲಿಯ ನೃತ್ಯವನ್ನು ಕಲಿಯುತ್ತಿದ್ದೆನೆ. 

ನೀವು ಯಾವಾಗಲೂ ಕಲಿಯುತ್ತಲೇ ಇರಬೇಕು. ನಿಮ್ಮ ಸ್ವಂತ ತಪ್ಪುಗಳು ಮತ್ತು ಯಶಸ್ಸುಗಳಿಂದ ಕಲಿಯಬೇಕು. ಇತರರ ತಪ್ಪುಗಳು ಮತ್ತು ಯಶಸ್ಸುಗಳಿಂದ ಕಲಿಯಬೇಕು. ಹೊಸ ವಿಧಾನಗಳನ್ನು ರಚಿಸಬೇಕು, ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಬೇಕು. "ನನಗೆ ಎಲ್ಲವೂ ತಿಳಿದಿದೆ" ಎಂದು ನೀವು ಹೇಳುವ ದಿನ, ನಿಮ್ಮ ನಾಯಕತ್ವದ ಅಂತ್ಯವಾಗಿರುತ್ತದೆ. ಈ ಅಜ್ಞಾನ ಮತ್ತು ಈ ವರ್ತನೆ, ನಿಶ್ಚಲತೆ ಹಾಗೂ , ಗಮನ ಮತ್ತು ನಂಬಿಕೆಯ ನಷ್ಟಕ್ಕೆ ಕಾರಣವಾಗಬಹುದು.

ಟೀಕೆಗೆ ಸಿದ್ಧರಾಗಿರಿ

ಹೌದು, ಟೀಕೆಗೆ ಸಿದ್ಧರಾಗಿರಿ. ಹಿರಿಯ ಶಿಕ್ಷಕರಾಗಿರಲಿ , ಕಿರಿಯ ಶಿಕ್ಷಕರಾಗಿರಲಿ ಅಥವಾ ನೃತ್ಯ ಸಂಗಾತಿಯಾಗಿರಲಿ, ನಾನು ಯಾವಾಗಲೂ ಅವರ ಟೀಕೆಯನ್ನು ಹೃತ್ಪೂರ್ವಕವಾಗಿ  ಸ್ವೀಕರಿಸುತ್ತೇನೆ. ಏಕೆಂದರೆ  ನೃತ್ಯಾಭ್ಯಾಸದಲ್ಲಿ ಆದ ಅಂತರದಿಂದ ನನ್ನ ನೃತ್ಯದಲ್ಲಿ ಉಂಟಾದ  ನಿಪುಣತೆಯ ಕೊರತೆಯ ಅರಿವು ನನಗೆ ಇದೆ. ನಾನು ಅದನ್ನು ಒಪ್ಪಿಕೊಳ್ಳದಿದ್ದರೆ, ನಾನು ಅವರ ಜೊತೆಗೆ ನೃತ್ಯ ಮಾಡಲು ಬೇಕಾದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಯಾವಾಗಲೂ ಟೀಕೆಯಿಂದ ಕಲಿಯಿರಿ. ಏನು ಬದಲಾಯಿಸಬೇಕು ಎಂಬುದನ್ನು ನೋಡಿ. ಏನು ಬದಲಾಯಿಸಬಾರದು ಎಂಬುದನ್ನು ನಿಮ್ಮ ಜನರಿಗೆ ವಿವರಿಸಿ. ನಿಮ್ಮ ಮಿತಿಗಳ ಬಗ್ಗೆ ತಿಳಿದಿರಲಿ. ಯಶಸ್ಸಿನ ಸರಿಯಾದ ಹಾದಿಯಲ್ಲಿ ಸಾಗಲು ನಿಮಗೆ  ಮತ್ತು ನಿಮ್ಮ ಜನರಿಗೆ ಸಹಾಯ ಮಾಡಿ.

ನಿಮ್ಮ ಜನರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಹೊಂದಿಕೊಳ್ಳಿ

ನನ್ನ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೃತ್ಯ ಪ್ರಕಾರಗಳನ್ನು ಕಲಿಯುತ್ತಿದ್ದವರು. ನನ್ನ ವಿದ್ಯಾರ್ಥಿಗಳು ನಮ್ಮ ಕಚೇರಿಯವರು 😊. ಕೆಲವರು ಕೈ ಮತ್ತು ಕಾಲುಗಳ  ಸಮನ್ವಿತ ಚಲನೆಯಲ್ಲಿ ನಿಪುಣರು, ಮತ್ತು ಕೆಲವರಿಗೆ ಅದು ಸಾಧ್ಯವೇ ಆಗುತಿರಲಿಲ್ಲ. ಕೆಲವರು ಕಷ್ಟಕರವಾದ ಚಲನೆಗಳನ್ನು ಮಾಡಬಲ್ಲವರು, ಕೆಲವರಿಗೆ ಅದು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಕಟ್ಟುನಿಟ್ಟಾದ ಬೋಧನಾ ವಿಧಾನಗಳಿಗೆ ಅಂಟಿಕೊಳ್ಳದೆ, ಪ್ರತಿಯೊಬ್ಬರೂ ಸುಲಭವಾಗಿ ಕಲಿಯಲು ಮತ್ತು ನಿಧಾನವಾಗಿ ಸಂಕೀರ್ಣ ಮಾದರಿಗಳನ್ನು ಮಾಡಲು ಸಾಧ್ಯವಾಗುವಂತೆ ಚಲನೆಗಳನ್ನು ಅಳವಡಿಸಿಕೊಳ್ಳ ಬೇಕಾಯಿತು. ಇದರಿಂದ ಅವರೆಲ್ಲರೂ ಕಲಿಕೆಯಿಂದ ಹೊರಗುಳಿಯದೆ, ವಾರದಿಂದ ವಾರಕ್ಕೆ ಉತ್ಸಾಹದಿಂದ ಹಿಂತಿರುಗುವುದನ್ನು ಖಚಿತಪಡಿಸಿದೆ (ಖಂಡಿತ, ಕೆಲವು ವಾರಗಳು ಸಂಪೂರ್ಣ ಸೋಮಾರಿತನದಿಂದ ಕಳೆದುಹೋಗುತ್ತಿದ್ದವು 😊).

ಜನರ ದೌರ್ಬಲ್ಯಗಳನ್ನು ಅರ್ಥೈಸಿಕೊಳ್ಳಿ  ಮತ್ತು ಅವರ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಿ. ಜನರು ನಿಧಾನವಾಗಿ ತಮ್ಮ ದೌರ್ಬಲ್ಯಗಳ ಮೇಲೆ ಕೆಲಸ ಮಾಡಲು ಸಹಾಯ ಮಾಡಿ. ಈ ಪ್ರೋತ್ಸಾಹ ಮತ್ತು ಸಕಾರಾತ್ಮಕ ಮನೋಭಾವವು ಒಬ್ಬ ವ್ಯಕ್ತಿಯನ್ನು ಯಶಸ್ಸನ್ನು ಸಾಧಿಸಲು ಉತ್ತಮವಾಗಿ ಮತ್ತು ಹೆಚ್ಚು ಶ್ರಮಿಸಲು ಪ್ರೇರೇಪಿಸುವಲ್ಲಿ ಸಹಾಯ ಮಾಡುತ್ತದೆ. ನಾಯಕ ಅಥವಾ ನಾಯಕಿಯೊಂದಿಗೆ ನಂಬಿಕೆಯನ್ನು ಸಹ ನಿರ್ಮಿಸುತ್ತದೆ. ತಂಡದ ಏಕೈಕ ಗುರಿಯ ಮೇಲೆ ಹೆಚ್ಚು ಗಮನಹರಿಸುವಲ್ಲಿ ಸಹಾಯ ಮಾಡುತ್ತದೆ.

ದುರ್ಬಲ ಕೊಂಡಿಯ ಮೇಲೆ ಕೆಲಸ ಮಾಡಿ ಮತ್ತು ಅದನ್ನು ನಿಮ್ಮ ಶಕ್ತಿಯಾಗಿ ಪರಿವರ್ತಿಸಿ

ನಾನು ಇದನ್ನು ಬಲವಾಗಿ ನಂಬುತ್ತೇನೆ. ಒಮ್ಮೆ, ಒಂದು ಕಾರ್ಯಕ್ರಮಕ್ಕೆ ಎರಡು ವಾರಗಳ ಮೊದಲು  ನನ್ನ ಮೊಣಕಾಲಿಗೆ ಗಾಯವಾಯಿತು. ನೋವಿನ ಕಾರಣ, ನೃತ್ಯದ ಕೆಲವು ಭಾಗಗಳನ್ನು ಪ್ರದರ್ಶಿಸುವುದು ಅಸಾಧ್ಯವಾಗಿತ್ತು. ಹಾಗಾಗಿ, ನನ್ನ ನೃತ್ಯ ಸಂಗಾತಿ ಮತ್ತು ನಾನು, ನೃತ್ಯದ ಹೆಚ್ಚಿನ ಭಾಗಗಳಲ್ಲಿ ಅವಳ ನೃತ್ಯವನ್ನು ತುಂಬುವ ಮೂಲಕ ಮತ್ತು ನನ್ನ ಇನ್ನೂ ಬಲವಾದ ಬದಿಗಳ ಮೇಲೆ ಕೆಲಸ ಮಾಡುವ ಮೂಲಕ, ಯಾವುದೇ ಸಮಸ್ಯೆಯ ಕುರುಹು ಇಲ್ಲದೆ ಪುನಃ ನೃತ್ಯ ಸಂಯೊಜನೆ ಮಾಡಿದೆವು.

ನಿಮ್ಮ ಕಾರ್ಯಾಚರಣಾ ತಂಡದಲ್ಲಿನ ದುರ್ಬಲ ಕೊಂಡಿಗಳೆನಿಸಿರುವವರ ಗುಪ್ತ ಸಾಮರ್ಥ್ಯಗಳನ್ನು ಗಮನಿಸಿ. ಈ ಗುಪ್ತ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲ್ಲಿ ನವೀನ ಪ್ರಯತ್ನಗಳನ್ನು ಮಾಡಿರಿ. ಈ ಗುಪ್ತ ಶಕ್ತಿಯು ಉತ್ತಮ ತಂಡ ರೂಪಿಸುವಲ್ಲಿ ಸಾಹಯಕವಾಗಬಹುದು, ಅಥವಾ ಹೊಸ ಹೊಸ(out-of-box) ಕಲ್ಪನೆಗಳನ್ನು ಪ್ರೇರೇಪಿಸಬಹುದು, ಅಥವಾ ತಂಡದ ಕಾರ್ಯಕ್ಷಮತೆಗೆ ಪ್ರಯೋಜನಕಾರಿಯಾಗಬಹುದು.

ಒಂದು ಕೆಲಸವನ್ನು ಮಾಡಲು ಬಹಳ ಉತ್ತಮ ಆಯ್ಕೆಗಳಿವೆ

ಒಂದು ಕಾರ್ಯವನ್ನು ಮಾಡಲು ಹಲವಾರು ಮಾರ್ಗಗಳು ಇರುತ್ತವೆ, ಅವುಗಳಲ್ಲಿ ಪರಿಸ್ಥಿತಿಗೆ ತಕ್ಕ ಅತ್ಯುತ್ತಮ ಮಾರ್ಗವನ್ನು ಆರಿಸಬೇಕು. ಹೊಸ ನೃತ್ಯ ಸಂಯೊಜನೆಗಳನ್ನು ರಚಿಸುವಾಗ, ಬಹಳಷ್ಟು ಸಲ ಈ ವಿಷಯವನ್ನ ಕಲಿತಿದ್ದೆನೆ. ನಾವು ಸಾಂಪ್ರದಾಯಿಕ ಸಂಯೋಜನೆಗಳನ್ನು ಅನುಸರಿಸುವುದೊ ಅಥವಾ ಕಥೆಯನ್ನು ಹೇಳುವ ನಮ್ಮದೇ ಆದ ವಿಧಾನಗಳನ್ನು ರಚಿಸುವುದು, ಅನ್ನುವುದರಲ್ಲಿ ನಮಗೆ ಹಲವು ಆಯ್ಕೆಗಳು ಸಿಗಬಹುದು. ನಾವು ನಮ್ಮ ಪ್ರೇಕ್ಷಕರಿಗೆ ಹೊಂದಿಕೊಂಡು , ಸಂದೇಶವೂ ಎಲ್ಲರಿಗೂ  ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಯಾವುದೇ ಕಾರ್ಯದಲ್ಲಿ ವಿಧವಿಧ ಆಯ್ಕೆಗಳಿರುತ್ತವೆ. ಒಂದು ಪ್ರಮಾಣಿತ ಆಯ್ಕೆ , ನಿಮ್ಮ ಆಯ್ಕೆ, ಅಥವಾ ನಿಮ್ಮ ಜನರ ಆಯ್ಕೆ. ಎಲ್ಲಾ ಆಯ್ಕೆಗಳನ್ನು ಚರ್ಚಿಸಲು ಮುಕ್ತರಾಗಿರಿ, ಆದರೆ ಎಲ್ಲದರ ನಂತರ, ಉತ್ತಮ ಆಯ್ಕೆಯನ್ನು ನಿರ್ಧರಿಸಿ.

ಅಭ್ಯಾಸ, ಪರಿಶ್ರಮ ಮತ್ತು ತಾಳ್ಮೆಯೇ ಯಶಸ್ಸಿಗೆ ಮೂಲ

ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ನೃತ್ಯವನ್ನು ಪುನರಾರಂಭಿಸುವುದು ಸುಲಭವಾಗಿರಲಿಲ್ಲ. ಪ್ರತಿಯೊಂದು ನೋವು, ಪ್ರತಿಯೊಂದು ವೈಫಲ್ಯವು ನನಗೆ ಹಿಮ್ಮೆಟ್ಟಿಸುವ ಪ್ರಯತ್ನ ಅನಿಸಿತು. ನನನ್ನು ಇಲ್ಲಿಯವೆರೆಗೆ ಕೊಂಡೊಯ್ದದ್ದು  - ತಾಳ್ಮೆ, ಅಭ್ಯಾಸ ಮತ್ತು ಪರಿಶ್ರಮ.

ತಾಳ್ಮೆಯಿಂದಿರಿ. ನಿಮ್ಮ ನಂಬಿಕೆಗಳಿಂದ ಹಿಂಜರಿಯದೆ, ಸ್ವಶಕ್ತಿ  ಮತ್ತು ತಂಡದ ಶಕ್ತಿಗಳನ್ನು ಸಕ್ಷಮವಾಗಿ ಉಪಯೊಗಿಸಿ, ದೀರ್ಘ ಹೋರಾಟಗಳ ನಂತರವೇ ಪ್ರತಿ ಮಹಾನ್ ಯಶಸ್ಸು ಸಾಧಿಸಬಹುದು. 

PS: ನೀವು ಇಲ್ಲಿ ನನ್ನ ಒಂದು ಪ್ರಯತ್ನವನ್ನು ವೀಕ್ಷಿಸಬಹುದು:



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗಮನ : ಕಲಿಕೆಯ ಅಡಿಪಾಯ